Thursday, 20 April 2017

ಜನಾ ಮರಳೊ ಜಾತ್ರೆ ಮರಳೊ.

ಸಾಮಾನ್ಯವಾಗಿ ಜಾತ್ರೆ ಅಂದರೆ ಅಲ್ಲಿ ಜನ ಸಾಗರ, ಎಲ್ಲರಿಗೂ ಹಬ್ಬದ ಸಡಗರ. ದೊರ ದೊರ ಊರುಗಳಿಂದ ಜನ ಬರುತ್ತಾರೆ. ವ್ಯಾಪಾರಿಗಳು ಬಂದು ಆದಸ್ಟು ಹಣ ಮಾಡಿಕೊಳ್ಳುತ್ತಾರೆ. ಹುಡುಗರು ಹುಡಗಿರನ್ನ ನೊಡೊಕೆ ಅಂತಾನೆ ಬರುತ್ತಾರೆ . ಹಾಗಂತ ಎಲ್ಲರೂ ಅಲ್ಲ. ಬಂದು ಬಳಗದವರು ಬರುತ್ತಾರೆ, ಸ್ನೇಹಿತರು ಬರುತ್ತಾರೆ. ಇವರಲ್ಲಿ ಯಾರು ಭಕ್ತಿಯಿಂದ ದೆವರಿಗೆ ಬಂದಿರುತ್ತಾರೆ ಅನ್ನೋದು ಹೆಳೊಕೆ ಆಗಲ್ಲ. 


ಆದರೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮೊಳವಾಡ ಗ್ರಾಮದಲ್ಲಿ ನಡೆಯುವ ಲಕ್ಷ್ಮಿ ಜಾತ್ರೆ ಬೆರೆ ತರಹ ಇರುತ್ತದೆ. ಇಲ್ಲಿ ಬರುವ ಜನ ಭಕ್ತಿ ಭಾವದಿಂದ ಬರುತ್ತಾರೆ ಅಂತ ಹೆಳ ಬಹುದು. ಇಲ್ಲಿನ ಜಾತ್ರೆ ನಡೆಸುವ ಬಗೆ ಬೆರೆ ತರಹ ಇರುತ್ತದೆ. ಇಲ್ಲಿ ಯಾವುದೆ ಆಟಿಕೆ ದೊರೆಯಲಿಲ್ಲ. ಯಾವ ತರಹದ ಸಿಹಿ ತಿನಿಸು ಮಾರಾಟ ಮಾಡಲ್ಲ. ಕೆಲವ ಒಂದೇ ದಿನದಲ್ಲಿ ಜಾತ್ರೆ ಮುಗಿದು ಜನರು ತಮ್ಮ ತಮ್ಮ ಮನೆಗಳಿಗೆ ಹೊರಡುತ್ತಾರೆ. ಇದೊಂದು ತರಹ ಸಣ್ಣ ಜಾತ್ರೆ ಆದ್ರೂ ಅಲ್ಲಿ ಭಕ್ತಿ ಇದೆ , ಜನರಲ್ಲಿ ನಂಬಿಕೆ ಇದೆ.

ಹಾಗಾದ್ರೆ ಬನ್ನಿ ನೋಡೋಣ ಏನದು ಅಂತ !!!

ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುವ ಜಾತ್ರೆ ಶುಕ್ರವಾರ ದಿನದಂದೇ  ನಡೆಯೋದು. ಗುರು ಹಿರಿಯರಾದ ಊರಿನ ಸದಾಷ್ಯರು, ಮುಖಂಡರು ಸೇರಿ ಜಾತ್ರೆ ನಡೆಸಿ ಕೊಡುತ್ತಾರೆ. ಊರಿನ ಜನಸಂಖ್ಯೆ ಕೇವಲ ೩೦೦೦- ೪೦೦೦ ಇದ್ದು,ಆದರೂ ಜಾತ್ರೆ ವಿಜೃಂಭಣೆ ಇಂದ ನಡೆಸಿ ಕೊಡಲು ಸಹಕರಿಸುತ್ತಾರೆ , ಜನರು ಬೇರೆ ಊರುಗಳಲ್ಲಿ ಇದ್ದವರು ಕೂಡ ಜಾತ್ರೆಗೆ ಬಂದು ಭಕ್ತಿ ಭಾವ ಮೆರೆಯುತ್ತಾರೆ.


 ಇಲ್ಲಿ ಜಾತ್ರೆ ಪ್ರಾರಂಭ ಆಗುವುದು ಬೆಳಿಗ್ಗೆ ಗಂಟೆಗೆ , ಏನಿದು ಅಷ್ಟು ಬೇಗ ಅಂತಿರಾ ? ಹೌದು ಅದು ಹರಕೆ ತೀರಿಸೋಕೆ ಜನ ಬೇಗ ಎದ್ದು ಕೃಷ್ಣ ನಧಿಗೆ ಹೋಗಿ ಅಲ್ಲಿ ಸ್ನಾನ ಮಾಡಿ ಹೊಳೆ ಪೂಜೆ ಮಾಡ್ತಾರೆ. ಆಮೇಲೆ ತಾವು ಯಾರ್ ಜೊತೆಗೂ ಮಾತನಾಡದೆ ಸಾಸ್ಟ್ಯಾಂಗ್ ನಮಸ್ಕಾರ್ ಹಾಕುತ್ತ 2km ದೂರ ದಿಂದ ಬರುತ್ತಾರೆ . ಬಂದು ಲಕ್ಷ್ಮಿ ಗುಡಿಯನ್ನು ಸುತ್ತು  ಸಾಸ್ಟ್ಯಾಂಗ್ ನಮಸ್ಕಾರ್ ಹಾಕುತ್ತ ಸುತ್ತುತ್ತಾರೆ. ಆಮೇಲೆ ಅಲ್ಲೇ ಸ್ನಾನ ಮಾಡಿ ಪೂಜೆ ಮಾಡಿ ಕೊಂಡು ಮನೆಗೆ ಹೋಗುತ್ತಾರೆ . ಇದು ಸುಮಾರು ೨೦೦ ರಿಂದ  ೩೦೦ ಜನ ಹರಕೆ ಕಟ್ಟಿಕೊಂಡವರು ಮಾಡುತ್ತಾರೆ . ಅವರಿಗೆ ಏನು ಸೌಲಭ್ಯ ಬೇಕೋ ಅದನ್ನ ಅಲ್ಲಿನ ಹಿರಿಯರು ಮಾಡಿರುತ್ತಾರೆ.

ಇನ್ನೊಂದು ಕಡೆ ಊಟದ ತಯಾರಿ ಮಾಡ್ತಾ ಇರುತ್ತಾರೆ . ಅದಕ್ಕೆ ಊರಿನ ಜನರು ಅಡುಗೆಗೆ ಬೇಕಾದ ಸಮುಗಳನ್ನು ತಮ್ಮ ಹೊಲದಲ್ಲಿ ಬೆಳೆದ ಬೆಳೆಯಿಂದ ತಂದು ಕೊಡುತ್ತಾರೆ. ಇದು ಮಹಾಪ್ರಸಾದ್ ಎಂದು ಜನರು ಮದ್ಯಹನ ಸೇವಿಸುತ್ತಾರೆ.ಸಮಯ ೧೧ ಗಂಟೆಗೆ ಗ್ರಾಮದಿಂದ (ಅಂದರೆ ಗುಡಿಗೂ ಮತ್ತೆ ಊರಿಗೂ km ದೂರ ಇದೆ) ಪಲ್ಲಕ್ಕಿ ( ದೇವರು ಇಡುವ ಮರದ ತೊಟ್ಟಿಲು ) ತೆಗೆದು ಕೊಂಡು ಡೊಳ್ಳು ಬಾರಿಸುತ್ತ ವಿಜೃಂಭಣೆ ಇಂದ ಜನರು ಬರುತ್ತಾರೆ. ಒರಲ್ಲಿ ಎಲ್ಲರು ಪಲ್ಲಕ್ಕಿಗೆ ನೈವೆದ್ಯ ಕಾಯಿ , ಕೊಟ್ಟು ಕಳಿಸಿ ಕೊಡುತ್ತಾರೆ. ಅದನ್ನು ಎತ್ತಿ ಕೊಂಡವರ ಕಾಲಿಗೆ ಭಕ್ತಿ ಇಂದ ನೀರು ಹಾಕುತ್ತಾರೆ.

೧೦೦೦ ರಿಂದ ೧೫೦೦ ಜನ ಪಲ್ಲಕ್ಕಿಯ ಜೊತೆಗೆ ಗ್ರಾಮದಿಂದ ನಡೆದುಕೊಂಡು ಗುಡಿಕಡೆಗೆ ಹೋಗುತ್ತಾರೆ. ಯಾವಾಗ ಪಲ್ಲಕ್ಕಿ ಗುಡಿ ಸಮೀಪ ಬರುತ್ತೆ ಅವಾಗ ಸಮಯ ೧೨ ಗಂಟೆ. ಅಷ್ಟರಲ್ಲಿ ಜನರು ಗುಡಿಗೆ ಬೈಕ್ ಅಲ್ಲಿ ಕಾರ್ ಅಲ್ಲಿ ಇನ್ನಿತರ  ವಾಹನಗಳಲ್ಲಿ, ಕೆಲವರು ಭಕ್ತಿ ಇಂದ ನಡೆದುಕೊಂಡು ಬಂದಿರುತ್ತಾರೆ. ಈವಾಗ ಪಲ್ಲಕಿ ಎತ್ತಿಕೊಂಡು ಗುಡಿ ಸುತ್ತು ಸುತ್ತಲೂ ಪ್ರಾರಂಭಿಸುತ್ತಾರೆ. ಗೃಹಿಣ್ಯರು ಮತ್ತು ಹೆಣ್ಣು ಮಕ್ಕಳು ಬಿಂದಿಗೆಯಲ್ಲಿ ನೀರು ತುಂಬಿಕೊಂಡು ಅದಕ್ಕೆ ಹೂವಿನ ಅಲಂಕಾರ ಮಾಡಿಕೊಂಡು,ಅದರಮೇಲೆ ತೆಂಗಿನಕಾಯಿ ಇಟ್ಟುಕೊಂಡು, ಪೂಜೆ ಮಾಡಿಕೊಂಡು ಮುಂದೆ ಹೋಗುತ್ತಾರೆ. ಡೊಳ್ಳು  ಹೊಡೆಯುವ ಯುವಕರು ಸೊಂಟಕ್ಕೆ ಡೊಳ್ಳು ಕಟ್ಟಿಕೊಂಡು ಭಾರಿ ಉತ್ಸಾಹದಿಂದ ಅದನ್ನು ಬಾರಿಸುತ್ತ ಅವರ ಹಿಂದೆ ನಡೆಯುತ್ತಾರೆ. ಅದರ ಹಿಂದೆ ಪಲ್ಲಕಿ ಮತ್ತೆ ಇನ್ನಿತರ ದೇವರ ವಸ್ತುಗಳನ್ನು ಹಿಡಿದು ಕೊಂಡು ಜನರು ಅದರ ಹಿಂದೆ ಬರುತ್ತಾರೆ.

ನಿಧಾನವಾಗಿ ಗುಡಿ ಸುತ್ತುತ್ತಾರೆ , ಡೊಳ್ಳು ಹೊಡೆಯುವ ಜನರು ಡೊಳ್ಳು ಹೊಡೆಯುತ್ತ ಕುಣಿಯುತ್ತ ೧೦ ರಿಂದ ೧೫ ನಿಮಿಷ ಅದನ್ನು ನೋಡುಗರಿಗೆ ಅಮೃತ ಊಣಿಸುತ್ತಾರೆ. ಪಲ್ಲಕ್ಕಿನ ಹೊತ್ತು ನಡೆಯಲು ಯುವಕರು ಸಾಲಿನಲ್ಲಿ ನಿಂತಿರುತ್ತಾರೆ. ಯಾಕಂದ್ರೆ ಪಲ್ಲಕ್ಕಿ ಎತ್ತಿಕೊಂಡರೆ ಅದರಿಂದ ಅವರಿಗೆ ಒಳ್ಳೇದಾಗುತ್ತೆ ದೇವರಿಗೆ ಅವರು ಸಲ್ಲಿಸುವ ಸೇವೆ ಅಂತ ಭಾವಿಸುತ್ತಾರೆ. ಗುಡಿ ಸುತ್ತ ೩೦೦೦ ೪೦೦೦ ಜನರು ನಿಂತು ನೋಡುತ್ತಿರುತ್ತಾರೆ. ಇನ್ನು ಕೆಲವರು ಎಲ್ಲರಿಗು ಅರಿಸಿನದ ಪುಡಿ ಅದನ್ನ ಭಂಡಾರ ಎಂದು ಕರಿಯುತ್ತಾರೆ, ಅದನ್ನ ಎಲ್ಲರು ಹಚ್ಚಿ ಭಕ್ತಿ ಇಂದ ದೇವರಿಗೆ ಕೈ ಮುಗಿಯುತ್ತಾರೆ. ಇದು ಬಳಗಾವಿಯ ಬಾಹುತೇಕ ಜಾತ್ರೆಗಳಲ್ಲಿ ಹಚ್ಚಲಾಗುತ್ತೆ. ಇದೆ ಸಮಯದಲ್ಲಿ ಜನರು ತಂದ ನೈವೆದ್ಯ ಪೂಜಾರಿಗೆ ಕೊಟ್ಟು ಪೂಜೆ ಮಾಡಿಸುತ್ತಾರೆ.ಕಾಣಿಕೆಗಳನ್ನು ಕೊಡುತ್ತಾರೆ

ಸುತ್ತು ಮುಗಿದಮೇಲೆ ಅಲ್ಲಿ ಪಲ್ಲಕ್ಕಿನ ದೇವಸ್ಥಾನ ದಲ್ಲಿ ಇಟ್ಟು ಎಲ್ಲರು ಊಟಕ್ಕೆ ಹೊರಡುತ್ತಾರೆ.ಇಲ್ಲಿ ಊಟ ಅಂದರೆ ಹುಗ್ಗಿ ಹಾಲು ತುಪ್ಪ, ಹೋಳಿಗೆ, ಬೆಲ್ಲ, ಅಣ್ಣ ಸಾಂಬಾರು, ಆದರೆ ಜನರು ಅಂಬಲಿ ಕುಡಿಯೋದಕ್ಕೆ ದಾರಿ  ನೋಡುತ್ತಿರುತ್ತಾರೆ. ಇತರಹದ ಊಟ ಮತ್ತೆಲ್ಲೂ ಸಿಗುವುದಿಲ್ಲ,  ಊಟ ಮುಗಿಸಿ ಎಲ್ಲರು ದೇವರಿಗೆ ಕೈ ಮುಗಿದು ಮನೆಗೆ ಹೋಗುತ್ತಾರೆ.

ಇದು ಸಣ್ಣ ಜಾತ್ರೆ ಆದ್ರೂ ಇದು ಬಹಳ ವಿಶೇಷತೆ ಹೊಂದಿದೆ. ಇಲ್ಲಿ ಜನರ ಭಕ್ತಿ ಯಾವತ್ತು ಮೋಸ ಹೋಗಿಲ್ಲ. ಭಕ್ತಿ ಇಂದ ಬೇಡಿಕೊಂಡೋರಿಗೆ ಒಳ್ಳೇದೇ ಆಗಿದೆ. ತಮಗೂ ತರಹದ ಜಾತ್ರೆನೋಡ್ಬೇಕು ಅಂದ್ರೆ. ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ನಮ್ಮ ಗ್ರಾಮಕ್ಕೆ ಬನ್ನಿ. ಇದರ ವಿಶೇಷತೆ ನೋಡಿ.

ಸಚಿನ್ ಕೋಕಣೆ
@BelagaviKunda ಟ್ವಿಟ್ಟರ್

  • Blogger Comments
  • Facebook Comments

0 comments:

Post a Comment

Item Reviewed: ಜನಾ ಮರಳೊ ಜಾತ್ರೆ ಮರಳೊ. Rating: 5 Reviewed By: Farhan Rasheed
Scroll to Top