Tuesday, 18 April 2017

ಸಿಗರೆಟ್ (ಧೂಮ್ರಪಾನ ) ಬಿಡುವುದು ಹೇಗೆ ?

ಸಿಗರೆಟ್ ಒಂದು ವಿಷಕಾರಿ, ಅದಕ್ಕೆ ಒಂದು ಸಲ ಅಡಿಕ್ಟ್ ಆದ್ರೆ ಅದನ್ನ ಬಿಡುವುದು ಎಷ್ಟು ಕಷ್ಟ ಅಂತ ನಿಮಗೆ ಗೊತ್ತೇ ಇದೆ ಆದರೆ ನನ್ನ ಸ್ವಂತ ಅನುಭವದಿಂದ ಅದನ್ನ ಹೇಗೆ ಬಿಡುವುದು ಅಂತ ವಿವರಿಸುತ್ತೇನೆ ಸಾದ್ಯವಾದರೆ ಅದನ್ನ ಹಿಂಬಾಲಿಸಿ . ನನ್ನ ಸಲಹೆಗಳು ಸಿಗರೆಟ್ ಬಿಡುವುದಕ್ಕೆ ನಿಮಗೆ ಸಹಾಯ ಮಾಡುತ್ತದೆ ಅಂತ ನನ್ನ ಅಣಿಯಿಸಿಕೆ. ಯಾಕೆಂದರೆ ನಾನು ಸಿಗರೆಟ್ ಬಿಟ್ಟು ವರ್ಷ ಆಯಿತು. ಇಲ್ಲಿಯವರೆಗೂ ಅದನ್ನ ಮುಟ್ಟಿಲ್ಲ. ನನಗೆ ಬಿಡು ಅಂತ ಯಾರು ಫೋರ್ಸ್ ಮಾಡಿಲ್ಲ, ಯಾರಾದ್ರೂ ಮಾಡಿದ್ರು ಅದನ್ನ ಬಿಡೋಕೂ ಆಗಲ್ಲ. ನಮಗೆ ನಾವೇ ಬಿಡಬೇಕುಯಾವುದೇ ಟ್ರಿಕ್ಸ್ ಇಂದ ಸಿಗರೇಟ್ ಬಿಡೋಕೆ ಆಗಲ್ಲ, ಯಾವುದೇ ಇಲೆಕ್ಟ್ರಾನಿಕ್ ಸಿಗರೆಟ್ ಇಂದನು ಸದ್ಯವಿಲ್ಲಾ,

ಇನ್ನು ಗರ್ಲ್ ಫ್ರೆಂಡ್ ಮೇಲೆ, ಅಮ್ಮನ ಮೇಲೆ, ಫ್ರೆಂಡ್ ಮೇಲೆ ಆನೆ ಮಾಡಿ ಬಿಡ್ತೀನಿ ಅಂದ್ರೆ ಅದು ಆಗಲ್ಲ.

ದೇವರ ಗುಡಿಗೆ ಹೋಗಿ ಅಲ್ಲಿ ಆನೆ ಪ್ರಮಾಣ ಮಾಡಿ ಬಿಡ್ತೀನಿ ಅನ್ನೋರು ಬಿಟ್ಟಿಲ್ಲ. ಹಾಗಾದರೆ ಇದನ್ನ ಬಿಡೋದಾದ್ರೂ ಹೇಗೆ . ? ನೀವೇನಾದ್ರು ಇದನ್ನ ನಿಮ್ ಫ್ರೆಂಡ್ , ಅಣ್ಣ ತಮ್ಮ ಬೇರೆ ಯಾರದಾದ್ರೂ ಬಿಡಿಸೋದರ ಬಗ್ಗೆ ಯೋಚಿಸ್ತಿದ್ರೆ ಮರೆತ ಬಿಡಿ . ಅದು ಅಗಡಿ ಕೆಲಸ .

ಸಿಗರೆಟ್ ನಾ ನವಾಜ್ ನಾವೇ ಬಿಡ್ಬೇಕು. ಅದು ಬೇರೆಯವರಿಂದ ಬಿಡಿಸೋಕೆ ಆಗಲ್ಲ. ಎಲ್ಲರೂ ಬಿಡ್ಬೇಕು ಅಂತಾನೆ ಇರ್ತಾರೆ ಆದ್ರೆ ಹೇಗ್ ಬಿಡೋದು ? ಅದು ಸಾಧ್ಯನಾ ಅನ್ನೋದೇ ಒಂದ್ ದೊಡ್ಡ ಯೋಚನೆ.. ನೀವು ಮೊದಲು ಮಾಡಬೇಕಾದ ಕ್ರಮಗಳು ಇಲ್ಲಿವೆ .
 
) ಪ್ರತಿದಿನ ಬೆಳಿಗ್ಗೆ ಮೊದಲು ಸಿಗರೆಟ್ ಎಲ್ಲಿ ಹೊಡಿತೀರಿ ಅನ್ನೋದು ನಿಮಗೆ ಗೊತ್ತಿರುತ್ತೆ . ಸಾಮಾನ್ಯವಾಗಿ smokers ಬೆಳಿಗ್ಗೆ ತಮಗೆ ಗೊತ್ತಿರೋ ಶಾಪ್ ಅಲ್ಲೇ ಹೊಡೀತಾರೆ. ಮೊದಲು ಅಲ್ಲಿ ಹೊಡೆದೆ ಮುಂದಿನ ಕೆಲಸಕ್ಕೆ ಹೋಗೋದು. ಅಂಗಡಿ ನಿಮ್ ಮನೆ ಅಥ PG ಪಕ್ಕದಲ್ಲೇ ಇರುತ್ತೆ.
ಅಂಗಡಿ ಇಂದ ನೀವು ಆದಷ್ಟು ದೂರ ಇರೋಕೆ ಪ್ರಯತ್ನ ಮಾಡಿ. ಮೊದಲ ಸಿಗರೆಟ್ ಬಿಡೋಕೆ ಆದಷ್ಟು ಪ್ರಯತ್ನ ಮಾಡಿ . ಇನ್ನ್ಯಾವತ್ತು ಅಂಗಡಿ ಕಡೆಗೆ ಹೋಗ್ಬೇಡಿ, ರೋಡ್ ಅಲ್ಲಿ ಹೋಗದೆ ಬೇರೆ ದಾರಿ ನೋಡ್ಕೊಳಿ . ಇಲ್ಲ ಅಂದ್ರು ಒಂದು ತಿಂಗಳಾದ್ರು .

) ನೀವು ದಿನಾಲೂ ಆಫೀಸ್ ಗೆ ಹೋದಾಗ ಅಲ್ಲಿ ಟೀ ಟೈಮ್ ಅಲ್ಲಿ ಒಂದ್ ಅಂಗಡಿಗೆ ಹೋಗ್ತೀರಾ, ಆಮೇಲೆ ಮದ್ಯಹನ ಊಟ ಆದ್ಮೇಲೆ ಹೋಗ್ತೀರಾ. ನಿಮಗೆ ನೀವೇ ತಡೆ ಹಿಡ್ಕೊಂಡು , ಟೀ ಟೈಮ್ ಅಲ್ಲಿ ಸಿಗರೆಟ್ ಹೊಡೆದು , ಮದ್ಯಹನ ಊಟದ ಸಮಯದಲ್ಲಿ ಮಾತ್ರ ಹೊಡಿಬೇಕು, ಕ್ರಮೇಣ ಅದನ್ನು ಗೆಳೆಯರೊಂದಿಗೆ ಸೇರಿ ಅದ್ರ ಅರ್ಧ ಹೊಡಿತಾ ಬಿಡ್ಬೇಕು.
 

) ನಿಮಗೆಲ್ಲ ಜಾಸ್ತಿ ಸಿಗರೆಟ್ ಹೊಡೆಯುವ ಗೆಳೆಯರೇ ಜಾಸ್ತಿ ಇರ್ತಾರೆ . ಅವರಿಗೆ ನೀವು ಸಿಗರೆಟ್ ಬಿಟ್ಟಿದೀನಿ ಅಂಥ ಹೇಳ್ಬೇಡಿ, ಅವರು ಅದನ್ನ ನಂಬಲ್ಲ, ಮತ್ತೆ ನಿಮ್ಮನ್ನ ಕೀಟ್ಲೆ ಮಾಡ್ತಾರೆ. ನಿಮಗೆ ಒತ್ತಡ ಹೇರಿ "ಒಂದೇ ಒಂದ್ ಹೊಡಿ ಏನ್ ಆಗಲ್ಲ ಈವತ್ತೇ ಲಾಸ್ಟ ಗುರು "ಅಂತಾರೆ. ನೀವೇನಾದ್ರು ನಿಮ್ಮ ಮನಸು ಬದಲಾಯಿಸಿ ಒಂದ್ ಸಿಗರೆಟ್ ಹೋಡಿದ್ರೆ ಅಷ್ಟೇ, ಅವರಿಗೆ ಸುಳ್ಳು ಹೇಳಿ, " ನಂಗೆ ಹೆಲ್ತ್ ಸರಿ ಇಲ್ಲ ಅದಕ್ಕೆ ಬೇಡ , ನಾಳೆ ಇಂದ ಹೊಡಿತೀನಿ ಅಂತ. ಆದಷ್ಟು ಅವರ ಜೊತೆ ಸುತ್ತಾಡೋದು ಬಿಡಿ.

) ಸಾಮಾನ್ಯವಾಗಿ ಜನರು ವರ್ಕ್ ಲೋಡ್ ಇಂದ ಟೆನ್ಶನ್ ಇಂದ ಸಿಗರೆಟ್ ಜಾಸ್ತಿ ಹೊಡೀತಾರೆ, ಆಫೀಸ್ ಅಲ್ಲಿ ಬಾಸ್ ಬೈದ್ರು ಅಂತಾನೋ ಇಲ್ಲ ಕೆಲಸದಲ್ಲಿ ತಲೆ ಓಡ್ತಿಲ್ಲ ಅಂತನೋ. ಈವಾಗ ನೀವು ಜಾಕ್ ಅಷ್ಟೊಂದು ಟೆನ್ಶನ್ ತಗೋತೀರಾ ? ಬೇರೆ non smokers ಹೇಗೆ ಅದನ್ನ ನಿಭಾಯಿತ್ಸರೇ ಅನ್ನೋದು ನೋಡಿ . ನೀವು ಸ್ವಲ್ಪ ತಾಳ್ಮೆ ತಗೊಂಡು ಅದನ್ನ ಬಿಟ್ಟು ಬೇರೆ ತರಹ ಯೋಚನೆ ಮಾಡಿ. ಯಾರಾದ್ರೂ ಬೈದ್ರು ಅಂತ ಟೆನ್ಶನ್ ಅಲ್ಲಿ ಸ್ಮೋಕ್ ಮಾಡೋಕೆ ಹೋಗ್ಬೇಡಿ.

) ನೀವು ದಿನಾಲೂ ೧೦ -೧೨ ಸಿಗರೆಟ್ ಹೊಡಿತಿದ್ರು ಅದನ್ನ ಬಿಡೋದು ಏನ್ ದೊಡ್ಡ ಕಷ್ಟ ಅಲ್ಲ . ಈವಾಗ ನೀವು ಬೆಳಿಗ್ಗೆ - , ಟೀ ಟೈಮ್ ೧೧-೧೨ ಊಟದ ಟೈಮ್ :೩೦-:೩೦ ಮತ್ತೆ ಟೀ ಟೈಮ್ - -:೩೦ ಸ್ಟಂಕಾಲ , ರಾತ್ರಿ ಊಟ ಟೈಮ್ ೧೦-೧೧ ಹೀಗೆ ಸ್ಮೋಕ್ ಮಾಡ್ತಿದ್ರೆ ನೀವು ಅಡಿಕ್ಟ್ ಆಗಿರಲ್ಲ, ನೀವು ಅದನ್ನ ಪ್ರಾಕ್ಟೀಸ್ ಮಾಡ್ಕೊಂಡಿರ್ತೀರ , ಈವಾಗ ಏನಾದ್ರು ಮಾಡಿ ಬೆಳಿಗ್ಗೆ ಸಿಗರೆಟ್ ಬಿಡಲೇ ಬೇಕು. ಅದೇ ನಿಮ್ಮನ್ನ ಸಿಗರೆಟ್ ಬಿಡಲು ಸಹಾಯ ಮಾಡುತ್ತದೆ.


) ನೀವು ಒಂದೊಂದೇ ಸಿಗರೆಟ್ ನಾ ಬಿಡೋಕೆ ಪ್ರಯತ್ನ ಮಾಡಿ . ಕೋಪ ಮತ್ತೆ ಟೆನ್ಶನ್ ದೂರ ಮಾಡಿ . ಸ್ನೇಹಿತರನ್ನ ಅದರಲ್ಲೂ ಸ್ಮೋಕ್ರ್ಸ್ ನಾ ದೂರ ಇಡೀ, ಮನೆಯಲ್ಲೇ ಕುಳಿತು ಸ್ವಲ್ಪ ನಿನ ಟಿವಿ ನೋಡ್ತಾ, ಬುಕ್ಸ್ ಓದ್ತಾ ಕಾಲ ಕಳೆಯಿರಿ. ಇಷ್ಟು ಮೊದಲ ಹಂತದಲ್ಲಿ ಮಾಡಿದ್ರೆ ಸಾಕು ನಿಮಗೆ ಅನ್ನಿಸುತ್ತೆ ನೀವು ಸಿಗರೆಟ್ ಬಿಡಬಹುದು. ನಿಮಗೆ ಮನಸಿನಿಂದ ಬಂದ್ರೆ ಅದು ಬಿಟ್ಟಹಾಗೆ . ಬೇರೆಯವರ ಒತ್ತಾಯದಿಂದ ಬಿಡೋಕೆ ಸಧ್ಯ ಇಲ್ಲ.


ಸಿಗರೆಟ್ ಬಿಟ್ಟ ಮೇಲೆ ಆಗುವ ಉಪಯೋಗಗಳು .

ದಿನದಲ್ಲಿ : blood ಪ್ರೆಷರ್,ದೇಹದ ಉಸ್ನಥೆ ಸಾಮಾನ್ಯ ಸ್ಥಿತಿ ಗೆ ಮರಳುತ್ತೆ. ರಕ್ತದಲ್ಲಿ ಆಕ್ಸಿಜನ್ ಜಾಸ್ತಿ ಆಗುತ್ತೆ , ಕಾರ್ಬೊನ್ ಮಾನಾಕ್ಸೈಡ್ ಸಾಮಾನ್ಯ ಸ್ಥಿತಿಗೆ ಮರಳುತ್ತೆ .

ದಿನದಲ್ಲಿ : ಹಾನಿ ಯಾಗಿರುವ ನರಗಳ ಬೆಳವಣಿಗೆ ಆಗತ್ತದೆ . ವಾಸನೆ ಮತ್ತು ರುಚಿ ಕಳ್ಕೊಂಡಿರೋ ಗ್ರಂಥಿಗಳು ಮರಳಿ ಯಥಾ ಸ್ಥಿತಿ ಗೆ ಬರುತ್ತವೆ.

೧೦ - ೧೫ ದಿನಗಳು : ವಸಡು ಮತ್ತೆ ಹಲ್ಲುಗಳಲ್ಲಿನ ರಕ್ತದ ಒತ್ತಡ ಸಾಮಾನ್ಯ ಸ್ಥಿತಿ ಗೆ ಮರಳುತ್ತದೆ .

ವರ್ಷ ದಲ್ಲಿ: ನಿಮಗೆ ಸಂಭವಿಸಬಹುದಾದಂಥ ಹಾರ್ಟ್ ಅಟ್ಟ್ಯಾಕ್ , ಕೊರೋನರಿ ಹೃದಯ ರೋಗ , ಸ್ಟೋಕ್ ಅರ್ಧದಷ್ಟು ಕಮ್ಮಿ ಆಗಿರುತ್ತದೆ .


ವರ್ಷ ದಲ್ಲಿ; ನಿಮಗೆ ಬರಬಹುದಾದ ಕ್ಯಾನ್ಸರ್ ಸಾಧ್ಯತೆ ೫೦% ಅಷ್ಟು ಕಮ್ಮಿ ಆಗಿರುತ್ತದೆ .

ಅರಿಗ್ಯಕರವಾದ ಜೀವನಕ್ಕಾಗಿ ಮೇಲೆ ಹೇಳಿದಂತೆ ಸಿಗರೆಟ್ ಬಿಡಲು ಸ್ವ ಈಚೆಯಿಂದ ಪ್ರಯತ್ನ ಮಾಡಿ ಯಾವುದೇ ಕಾರಣಕ್ಕೂ ಬಿಟ್ಟ ಮೇಲೆ ಮುಟ್ಟೋಕು ಹೋಗ್ಬೇಡಿ, ಇದರಿಂದ ಎಲ್ಲರಿಗು ಒಳ್ಳೇದು


ಸಚಿನ ಕೋಕಣೆ
@BelagaviKunda (ಟ್ವಿಟ್ಟರ್) 


  • Blogger Comments
  • Facebook Comments

0 comments:

Post a Comment

Item Reviewed: ಸಿಗರೆಟ್ (ಧೂಮ್ರಪಾನ ) ಬಿಡುವುದು ಹೇಗೆ ? Rating: 5 Reviewed By: Farhan Rasheed
Scroll to Top