Monday, 17 April 2017

ಸಲ್ಮಾನ್ ಖಾನ್ ಫ್ಯಾನ್ ಮತ್ತು ಟಿ ವಿ ೯ ಮಾಜಿ ರಿಪೋರ್ಟರ್ , ರೆಹ್ಮಾನ್ ಕನ್ನಡ ಸಿನಿಮಾ ಹೀರೋ 'ಗರ'

ಕನ್ನಡ  ಸಿನಿಮಕ್ಕೆ ಮೊದಲ ಬಾರಿಗೆ  ಸಲ್ಮಾನ್ ಖಾನ್ ಫ್ಯಾನ್ ರೆಹ್ಮಾನ್ ಮತ್ತು ಹಿಂದಿ ಸಿನಿಮಾದ ಹಾಸ್ಯ ನಟ ಜಾನಿ  ಲಿವರ್  'ಗರ' ಚಿತ್ರದಲ್ಲಿ ನಗಿಸುವುದಕ್ಕೆ ಬರಲಿರುವ ಹೊಸ ಸುದ್ದಿ ಕೇಳಿ ಬಂದಿದೆ . ಕರಾವಳಿಯುವರೆಗೂ ಬಂದು ತುಳು ಸಿನಿಮಾದಲ್ಲಿ ನಟಿಸಿದ್ದರು ಹಿಂದಿ ಚಿತ್ರಗಳ ಜನಪ್ರಿಯ ನಗೆನಟ ಜಾ ನಿ  ಲಿವರ್ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಅವರನ್ನು ಕನ್ನಡಕ್ಕೆ  ಕರೆತರುತ್ತಿರುವುದು ಯಾರು  ಗೊತ್ತಾ ? ಮುರಳಿಕೃಷ್ಣ . ನಿರ್ದೇಶಕ ಶಾಂತರಾಂ ಅವರ ಸಹೋದರರಾದ ಮುರಳಿಕೃಷ್ಣ ಈಗ ಸದ್ದಿಲ್ಲದೆ ಒಂದು ಸಿನಿಮಾ ಶುರು ಮಾಡಿದ್ದಾರೆ. ಹೆಸರು ' ಗರ'. ಮೊನ್ನೆ ಮಹಿಳಾ ದಿನದಂದು ಗುಬ್ಬಲಾಳ ಹೌಸ್ ನಲ್ಲಿ ಚಿತ್ರಕ್ಕೆ ಮುಹೂರ್ತವಾಗಿದೆ.  ಖ್ಯಾತ  ಗಾಯಕಿ ಮಂಜುಳಾ ಗುರುರಾಜ್, ನಟಿ  ರೂಪಾದೇವಿ, ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಮುಂತಾದವರು ಈ ಮುಹೂರ್ತ ಸಮಾರಂಭಕ್ಕೆ ಬಂದು ಶುಭ ಕೋರಿದ್ದಾರೆ. ಮುಹೂರ್ತಕ್ಕೆಂದೇ ೧೦ ಅಡಿಯ ಕ್ಲಾಪ್ ಬೋರ್ಡ್ ಮಾಡಿಸಲಾಗಿದ್ದು ವಿಶೇಷವಾಗಿತ್ತು. ಇನ್ನು ಮಂಜುಳಾ ಗುರುರಾಜ್ ಅವರ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ, ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 


 ಈ ಚಿತ್ರದ ವಿಶೇಷತೆಯೆಂದರೆ, ಇದುವರೆಗೂ ಸುದ್ದಿ ವಾಚಕರಾಗಿದ್ದ ಮತ್ತು ಸಲ್ಮಾನ್ ಖಾನ್ ಫ್ಯಾನ್ ರೆಹ್ಮಾನ್ ಹೀರೋ ಆಗುತ್ತಿರುವುದು.

'ಬಿಗ್ ಬಾಸ್' ನ ಮೂರನೆಯ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ರೆಹ್ಮಾನ್, ಆ ನಂತರ ಕಲರ್ಸ್ ಸೂಪರ್ ಗಾಗಿ ಒಂದು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈಗ ' ಗರ ' ಚಿತ್ರದ ಮೂಲಕ ಅವರು ಹೀರೋ ಆಗುತ್ತಿದ್ದಾರೆ. ಅವರ ಜೊತೆಗೆ ಆರ್ಯನ್, ಅವಂತಿಕಾ, ರಾಮಕೃಷ್ಣ ಸಾಧು ಕೋಕಿಲ ಮತ್ತು ಜಾನಿ ಲಿವರ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮುರಳಿಕೃಷ್ಣ ಅವರೇ ೨೫ ಫ್ರೇಮ್ ಫಿಲಂಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ.  

ಅಂತು ಇಂತೂ ರೆಹ್ಮಾನ್ ಅವನ ಕನಸನ್ನು ಸಧ್ಯ ಮಾಡಲು ಸಿನಿಮಾಗೆ ಮೊದಲ ಹೆಜ್ಜೆ ಇಟ್ಟೇಬಿಟ್ಟಿದ್ದಾನೆ, ನಾನು ರೆಹ್ಮಾನ್ ಅವರನ್ನು ಎಂ ಕೃಷ್ಣ ಕಾಲೇಜು ಪಿ. ಯು. ಸಿ ತರಗತಿಯಿಂದ ಪರಿಚಯ, ಇವನ ಚೊತೆ ಕ್ಲಾಸ್ ಮೇಟ್ ಆಗಿದ್ದೆ. ಪ್ರತಿ ದಿನವೂ ಸಲ್ಮಾನ್ ಖಾನ್ ತರಹ ಡ್ರೆಸ್ ಮಾಡಿಕೊಡು ಬರುತ್ತಿದ್ದ ಶಾಲೆಗೆ ರೆಹ್ಮಾನ್. ಇವತ್ತು ಕನ್ನಡ ಸಿನಿಮಾದ ಸಲ್ಮಾನ್ ಖಾನ್ ಆಗಲು ಹೆಜ್ಜೆ ಹಾಕಿರೋದು ನಿಜವಾಗಿಯೂ ಖುಷಿ ಪಡೆಯುವಂತಹ ವಿಷಯ. ರೆಹ್ಮಾನ್ ಕನ್ನಡ ಸಿನಿಮಾ ಆಡಳಿತ ಮಾಡಬೇಕು ಎಂದು ನನ್ನ ಒಂದು ಕನಸು . 

'ಗರ' ಸಿನಿಮಾ ನೋಡುವುದಕ್ಕೆ ನಿನ್ನ ಈ ಸ್ನೇಹಿತ ಮತ್ತು ನಿನ ಹೊಸ ಫ್ಯಾನ್ ಗಳು ಕಾಯುತ್ತಇದರೆ ರೆಹಮಾನ್ ಬೇಗ ಸಿನಮಾ ರಿಲೀಸ್ ಬಗ್ಗೆ ಸುದ್ದಿ ತಿಳಿಸು ನಮಗೆ.
  • Blogger Comments
  • Facebook Comments

0 comments:

Post a Comment

Item Reviewed: ಸಲ್ಮಾನ್ ಖಾನ್ ಫ್ಯಾನ್ ಮತ್ತು ಟಿ ವಿ ೯ ಮಾಜಿ ರಿಪೋರ್ಟರ್ , ರೆಹ್ಮಾನ್ ಕನ್ನಡ ಸಿನಿಮಾ ಹೀರೋ 'ಗರ' Rating: 5 Reviewed By: Farhan Rasheed
Scroll to Top