Wednesday, 12 April 2017

ಬಿ ಸ್ ೩ ಮತ್ತು ೪ ವಾಹನಗಳು.

ನಿಮಗೆಲ್ಲ ಗೊತ್ತೇ ಇದೆ ಮಾರ್ಚ್ ತಿಂಗಳ ಕೊನೆಗೆ ಸುಪ್ರೀಂ ಕೋರ್ಟ್ ಎಲ್ಲರಿಗು ಒಂದು ಆಘಾತಕೇರಿ ಆದೇಶ ಹೊರಡಿಸಿತು, ಅದನ್ನ ಕೇಳಿ ಜನರಿಗೆ ಏನಾಗುತ್ತಿದೆ ಅಂತಾನೆ ಗೊತ್ತಾಗಿರಲಿಲ್ಲ. ಬಿ ಸ್ ೩ ವಾಹನಗಳ ಉತ್ಪಾದನೆ ಮತ್ತು ನೋಂದಣಿ ಪ್ರಿಲ್ ೧ ರಿಂದ ಮಾಡೋ ಹಾಗೆ ಇಲ್ಲ ಅಂತ. ಆದರೆ ಈ ವಿಷಯ ಎಲ್ಲರಿಗು ಆರ್ಥ ಆಗದೆ ಹೋಗಿ ಜನರು ಕಂಗಲಾದ್ರು. 


ಏನಿದು ಬಿ ಸ್ ೩ ವಾಹನಗಳು ಅಂತ ? ಹಾಗಾದ್ರೆ ನಮ್ಮ ಹತ್ರ ಇರೋ ವಾಹನ ಯಾವ್ದು.? ಇದರಿಂದ ಏನಾಗುತ್ತೆ ಅನ್ನೋದೇ ಅವರಿಗೆ ತೋಚಲಿಲ್ಲ.ತಮ್ಮತಮ್ಮ ಪರಿಚಯದ ಬಂದು ಮಿತ್ರರಿಗೆ ಕರೆ ಮಾಡಿ , ಏನಿದು ಬಿ ಸ್ ೩ , ಏನಿದು ಬಿ ಸ್ ೪ ವಾಹನ ಅಂತ ಕೇಳಿದ್ರು . ಆದ್ರೂ ತುಂಬಾ ಜನರಿಗೆ ಅದು ಅರ್ಥ ವಾಗ್ಲೆ ಇಲ್ಲ. ಮಾರನೇ ದಿನ ಪೇಪರ್ ಅಲ್ಲಿ ಟಿವಿ ಲಿ ಜಾಹಿರಾತು ಬಂತು. " ಬಿ ಸ್ ೩ ವಾಹನಗಳಿಗೆ ಆಫರ್ ಮೂಲಕ ಕಡಿಮೆ ಬೆಲೆಗೆ ಮಾರಲಾಗುತ್ತಿದೆ ಅಂತ . ತುಂಬಾ ಜನ ಅದನ್ನ ನೋಡಿ ಷೋರೂಮ್ ಕಡೆಗೆ ಧಾವಿಸಿದ್ರು , ಕರೆ ಮಾಡಿ ಕೇಳಿದ್ರು. ನಿಜ್ವಾಗ್ಲೂ ೧೦- ೨೫ ಸಾವಿರ ರೂಪಾಯಿ ಆಫರ್ ಇದೆಯಾ ? ಯಾಕೆ ಆ ಆಫರ್ ? ಏನು ಪ್ರಾಬ್ಲಮ್ ಇದೆ ಆ ವಾಹನದಲ್ಲಿ ? ಇನ್ನು ಕೆಲವರಂತೂ ತಮ್ಮ ಬೈಕ್ ಬಿ ಸ್ ೩ ಆದ್ರೆ ಏನಾಗುತ್ತೆ ? ಅದನ್ನ ನಾವು ಉಪಯೋಗಿಸೋಕೆ ಬಿಡತಾರಾ , ಇನ್ಮುಂದೆ ನಾವೆಲ್ಲ ಬಿ ಸ್ ೪ ವೆಹಿಕಲ್ ಮಾತ್ರ ಬಳಕೆ ಮಾಡ್ಬೇಕಾ? ಅನ್ನೋ ಪ್ರಶ್ನೆಗಳ  ಸೂರಿಮಳೆ ...

ಇನ್ನು ಇಟ್ತಚೆಗೆ ವಾಹನ ಖರೀಧಿ ಮಡಿದ ಜನರದ್ದು ಗೊಳೋ ಗೋಳು ?ಇದನ್ನ ಮೊದಲೇ ಹೇಳಿದ್ರೆ ಬಿ ಸ್ ೪ ವಾಹನ ತಗೋತಿದ್ವಾ  ಅಥವಾ ಆಫರ್ ಅಲ್ಲಿ ೧೫- ೨೫ ಸಾವಿರ ಉಳಿತುತ್ತ .. ಇನ್ನು ಕೆಲವರು ಮೊನ್ನೆ ತಗೊಂಡಿರೋ ಬಿ ಸ್ ೩ ವಾಹನ ರಿಜಿಸ್ಟ್ರೇಷನ್ ಆಗುತ್ತೋ ಇಲ್ವಾ  ಅಂಥಾ ಷೋರೂಮ್ ಕಡೆಗೆ ಓಡಿ ಹೋದ್ರು .
 
ಹಾಗಾದ್ರೆ ಏನಿದು ಬಿ ಸ್ ೩ ವೆಹಿಕಲ್ ? ಯಾಕೆ ಇದನ್ನ ಸರಕಾರ ರಿಜಿಸ್ಟ್ರೇಷನ್ ಮತ್ತು ತಯಾರಿಕೆ ತಡೆ ಹಿಡಿದ್ರು ? 

ಕಾರಣ : ಬಿ ಸ್ ೩ ಎಂಜಿನ್ ವಾಹನಗಳಿಂದ ನಮ್ಮ ಪ್ರಕೃತಿ , ಪರಿಸರ ಹಾಳಾಗುತ್ತೆ, ವಾಯುವ್ಯಮಾಲಿನ್ಯ ಆಗುತ್ತೆ ಅನ್ನೋ ಕಾರಣದಿಂದ ಸುಪ್ರೀಂ ಕೋರ್ಟ್ ಬಿ ಸ್ ೨ ವಾಹನ ನೋಂದಣಿ ಏಪ್ರಿಲ್ ೧ ರಿಂದ ಮಾಡ್ಬಾರು ಅಂತ ಆದೇಶ ಹೊರಡಿಸಿದೆ.

ಬಿ ಸ್ ೩ - ಭಾರತ್ ಸ್ಟೇಜ್ ೩ ಬಿ ಸ್ ೩ - ಭಾರತ್ ಸ್ಟೇಜ್ ೩ ಇಂದ ಪರಿಸರ ಮತ್ತು ಮನುಷನ್ ಆರೋಗ್ಯಕ್ಕೆ ಹಾನಿಕಾರಕ, ಇದರಿಂದ ಜಾಸ್ತಿ ಹೋಗೆ ಮತ್ತು ಪರಿಣಾಮಕಾರಿ ಇಂಗಾಲದ ಡೈ ಆಕ್ಸೈಡ್ ಬರುತ್ತದೆ. ದೇಶಾಧ್ಯಂತ ಹೆಚ್ಚುತ್ತಿರುವ ಅಪಾಯಕಾರಿ ಹೋಗೆ ಇಂದ ಜನರು ಸಾಯ್ತಾ ಇದಾರೆ . ಜನರ ಒಳಿತಿಗಾಗಿ ಸುಪ್ರೀಂ ಕೋರ್ಟ್  ಈ ನಿರ್ಧಾರ ಕೈ ತಗೆದು ಕೊಂಡಿದೆ.

ಹಾಗಾದ್ರೆ ಇದನ್ನ ಶೀಘ್ರವಾಗಿ ನಿಲ್ಲಿಸೋದ್ರಿಂದ ವಾಹನ ತಯಾರಿಕಾ ಕಂಪನಿ ಮಾಲೀಕರಿಗೆ ನಷ್ಟ ಉಂಟಾಗಲ್ವ?

ಹೌದು ಆಗುತ್ತದೆ.! ಆದ್ರೆ ಬಿ ಸ್ ೩ ವಾಹನಗಳಿಂದ ಆಗ್ತಾ ಇರೋ ಪರಿಸರ ಮಾಲಿನ್ಯ ಮತ್ತು ಜೀವ ಹಾನಿ ಮುಂದೆ ಇದೇನು ದೊಡ್ಡ ವಿಷಯ ಅಲ್ಲ. ಇದರಿಂದ ೩೦-೪೦ % ಅಷ್ಟು ಪರಿಸರ ಹಾಳಾಗೋದನ್ನ ಒಂದೇ ಒಂದು ವರುಷದಲ್ಲಿ ನಿಲ್ಲಿಸಬಹುದು . ಹಳೆಯ ವಾಹನಗಳನ್ನು ಮಾರುವದಕ್ಕೆ ಅಂದರೆ ಬಿ ಸ್ ೩ ಎಂಜಿನ್ ಗಳನ್ನೂ ಮಾರಾಟಕ್ಕೆ ಸ್ವಲ್ಪ ಟೈಮ್ ಬೇಕು ಅಂತ ವಾಹನ ಮಾಲೀಕರು ಕೇಳಿ ಅರ್ಜಿ ಹಾಕಿದ್ದರು ಸುಪ್ರೀಂ ಕೋರ್ಟ್ ಅದನ್ನ ತಿರಸ್ಕರಿಸಿ ಈ ನಿರ್ಧಾರ ಕೈಗೆ ತಗೊಂಡಿದೆ. ಈವಾಗ್ಲೇ ಆಗಿರೋ ಪರಿಸರ ನಾಶ ಸಾಕು ಇದರಿಂದ ಯಾರಿಗೂ ಒಳ್ಳೇದಲ್ಲ. ಬಿ ಸ್ ೩ ವಾಹನ ನೋಂದಣಿ ಅಪ್ರಿಲ್೧ ೨೦೧೭ ರಿಂದ ನಿಲ್ಲಿಸಿ ಅಂತ ಸುಪ್ರೀಂ ಕೋರ್ಟ್ ಮಾರ್ಚ್ ೨೯ ರಂದು ಆದೇಶ ಹೊರಡಿಸಿತು

ಹಾಗಾದ್ರೆ ಕೋರ್ಟ್ ಮೊದಲೇ ತಯಾರಿಕಾ ಕಂಪನಿ ಗಳಿಗೆ ಇದರ ಬಗ್ಗೆ ನೋಟೀಸ್ ನೀಡಿರಲಿಲ್ಲವೇ ?
ಬಿ ಸ್ ೩ ವಾಹನ ಉತ್ಪಾದನೆ ಮಾಡೋಹಾಗಿಲ್ಲ ಅಂತ ಮೊದಲೇ ಕೋರ್ಟ್  ಉತ್ಪಾದಕರಿಗೆ ನೋಟೀಸ್ ಕೊಡ ಕೊಟ್ಟಿತ್ತು. ಆದರೂ ಕೆಲವು ಕಂಪನಿ ಇದನ್ನ ನಿರ್ಲಕ್ಷಿಸಿ ಉತ್ಪಾದನೆ ಮಾಡಿದ್ದಾರೆ. ಅದಕ್ಕೆ ಯಾವದೇ ಬಿ ಸ್ ೩ ವಾಹನ ಏಪ್ರಿಲ್ ೧ ರಿಂದ ನೋಂದಣಿ ಮಾಡೋ ಹಾಗೆ ಇಲ್ಲ ಅಂತ ಆದೇಶ ಹೊರಡಿಸಿದ್ರು. ಈವಾಗ ಯಾವ ಹೊಸ ಬಿ ಸ್ ೩ ವಾಹನ ನೋಂದಣಿ ಮಾಡಿಕೊಳ್ಕೆ ಆಗಲ್ಲ, ಬೇಕು ಅಂದ್ರೆ ಬಿ ಸ್ ೪ ವಾಹನ ಸಿಗುತ್ತೆ.

 ಬಿ ಸ್ ೪ ಮಾಡೆಲ್ ಅಲ್ಲಿ ಈರೋ  ಬದಲಾವಣೆಗಳಾದ್ರು ಏನು ? 

ಹಾಗೆ ನೋಡೋಕೆ ಹೋದ್ರೆ ಏನು ಬದಲಾವಣೆಗಳು ಕಂಡು ಬರಲ್ಲ. ನೋಡೋದಕ್ಕೆ ಎರಡು ಒಂದೇ ತರಹ ಇರುತ್ತೆ.

ಆದ್ರೆ ಅದರಿಂದ ಆಗೋ ಪರಿಸರ ಮಾಲಿನ್ಯ ತಡೆಗಟ್ಟಬಹುದು .

ಬಿ ಸ್ ೩
carbonmonoxide 2.30 g/km
HC 0.20 g/km
NOX 0.15 g/km

ಆದರೆ  ಬಿ ಸ್ ೪
carbonmonoxide 1.00 g/km
HC 0.10 g/km
NOX 0.08g/km

ಇದೆ ಮಹತ್ವವಾದ ಬದಲಾವಣೆ. 

ಹಳೆ ಬಿ  ಸ್ ೩ ವಾಹನ ಮಾರಾಟ ಮಾಡಬಹುದಾ  ಅಥವಾ ತಗೆದುಕೊಳ್ಳಬಹುದಾ ? 

ಈವಾಗ ಜನರ ತಲೇಲಿ ಹಳೆಯ ಬಿ ಸ್ ೩ ವಾಹನ ಮಾರಾಟ ಮಾಡಬಹುದಾ ಅಂತ ಸಂದೇಹ ಇರ್ಬಹುದು? ಇದರ ಬಗ್ಗೆ ಇನ್ನು ಸರಿಯಾದ್ ಮಾಹಿತಿ ಸಿಕ್ಕಿಲ್ಲ . ಅದಕ್ಕೆ ಯಾರು ಹಳೆಯ ವಾಹನ ಮಾರುವ ಹಾಗು ತಗೆದು ಕೊಳ್ಳುವ ವಿಚಾರ ಮಾಡ್ಬಾರ್ದು . 

ಬಿ ಸ್ ೩ ವಾಹನದಲ್ಲಿ ನಷ್ಟ ಅನುಭವಿಸರ್ವ್ ಉತ್ಪಾದನಾ ಕಂಪನಿ ಗಳು ಇನ್ನು ಬರುವ  ಹೊಸ ಬಿ ಸ್ ೪ ವಾಹನಗಳ ಬೆಲೆ ಜಾಸ್ತಿ ಮಾಡ್ತಿವೆ. ಆದ್ರೂ ನಾವು ಪರಿಸರ ರಕ್ಷಣೆಗೆ ಪಣತೊಟ್ಟು ಬಿ ಸ್ ೪ ವಾಹನ ಕೊಳ್ಳಬೇಕು . ಹಳೆಯ ಬಿ ಸ್ ೩  ವಾಹನ ಬಳಕೆ ಕಮ್ಮಿ ಮಾಡಿ ನಮ್ಮ ಪರಿಸರ ರಕ್ಷಿಸಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು .

Sachin kokane
@BelagaviKunda (twitter)  • Blogger Comments
  • Facebook Comments

2 comments:

  1. ಮಾಹಿತಿ ಹಾಗೂ ಬರವಣಿಗೆ ಎರಡೂ ಚೆನಾಗಿದೆ.. ಹೀಗೇ ಬರೀತಾ ಇರಿ.. ಟ್ವಿಟರಲ್ಲಿ ಹಾಕೋದ ಮರೀಬೇಡಿ..

    ReplyDelete
  2. ಧನ್ಯವಾದಗಳು

    ReplyDelete

Item Reviewed: ಬಿ ಸ್ ೩ ಮತ್ತು ೪ ವಾಹನಗಳು. Rating: 5 Reviewed By: Farhan Rasheed
Scroll to Top